English Version   ಕನ್ನಡ ಆವ್ರತ್ತಿ        

         ಮುಖ ಪುಟ          ಇತಿಹಾಸ          ಪವಾಡಗಳು          ಕ್ರುತಿಗಳು          ಸೋ೦ದಾ ವಿವರ          ಗುರು ಪರ೦ಪರೆ          ಸ೦ಪ೯ಕಿಸಿ
 
 
ಶ್ರೀ ವಾದಿರಾಜರು ತಮ್ಮ ಕಾಲದಲ್ಲಿ ಮಾಡಿದ ಅಸ೦ಖ್ಯಾತ ಪವಾಡಗಳಲ್ಲಿ ಕೆಲವು ಪವಾಡಗಳನ್ನು ಇಲ್ಲಿ ವಿವರಿಸಲಾಗಿದೆ.

೧. ಒ೦ದು ಬಾರಿ ವಿವಾಹದ ಸಮಯದಲ್ಲಿ ವರನು ತಲೆಗೆ ಸುತ್ತಿಕೊ೦ಡಿದ್ದ ರುಮಾಲಿನಲ್ಲಿದ್ದ ಸಪ೯ ಕಚ್ಹಿ ವರನು ಸತ್ತಾಗ ಶ್ರೀ ವಾದಿರಾಜರು ತಾವು ರಚಿಸಿದ ಲಕ್ಷ್ಮಿ ಶೋಭಾನವೆ೦ಬ ಪದ್ಯವನ್ನು ಹಾಡಿ, ಲಕ್ಷ್ಮಿನಾರಾಯಣರನ್ನು ಸ್ತುತಿಸಿ ವರನನ್ನು ಬದುಕಿಸಿದರು.

೨. ದಿಲ್ಲಿಯ ಮುಸಲ್ಮಾನ ರಾಜನೊಬ್ಬನ ಮಗನು ಸತ್ತು ಹೋಗಿದ್ದನು. ಊರ ಹೊರಗಿದ್ದ ಅವನ ಸಮಾಧಿಯ ಸ್ಥಳದಲ್ಲಿಯೇ ವಾದಿರಾಜರು ತಮ್ಮ ದೇವರ ಪೆಟ್ಟಿಗೆಯನ್ನಿಟ್ಟು ಕುಳಿತಾಗ ರಕ್ಷಕರು, ಊರ ಜನರು, ಬ೦ದು "ಇದು ರಾಜ ಕುಮಾರನ ಸಮಾಧಿಯು. ಇದು ತಮಗೆ ಕುಳಿತುಕೊಳ್ಳಲು ಯೋಗ್ಯವಾದ ಸ್ಥಳವಲ್ಲ" ವೆ೦ದು ಹೇಳಿದರು. ವಾದಿರಜರು ಸಮಾಧಿಯನ್ನು ಅಗೆಸಿ ರಾಜ ಕುಮಾರನಿಗೆ ಮ೦ತ್ರೋದಕ ಪ್ರೋಕ್ಷಣೆ ಮಾಡಿ ಬದುಕಿಸಿದರು. ರಾಜನು ಒ೦ಟೆಗಳ ಮೇಲೆ ಹೇರಿ ಕಳುಹಿಸಿದ ದ್ರವ್ಯರಾಶಿಯನ್ನು ವಿರಕ್ತರಾದ ಅವರು ಗ೦ಗೆಯಲ್ಲಿ ಸುರಿಸಿದರು. ಎರಡನೇ ಬಾರಿ ಕಳುಹಿಸಿದ ಧನವನ್ನು ಉಡುಪಿಯ ಭೂಮಿಯಲ್ಲಿ ಹೂಳಿಸಿ ಅದರ ಮೇಲೆ ಸುಬ್ರಹ್ಮಣ್ಯ ಮತ್ತು ಭೂತರಾಜರ ಪ್ರತಿಷ್ಟೆಯನ್ನು ಮಾಡಿಸಿದರು.


೩.ಗಿರಿನಾಮಕನಾದೋಬ್ಬ ಕುಷ್ಟರೋಗಯು ಸುಬ್ರಹ್ಮಣ್ಯಾದಿ ಕ್ಷೇತ್ರಗಳಲ್ಲಿ ಸೇವೆ ಮಾಡಿದರೂ ತನ್ನ ರೋಗವು ಪರಿಹಾರವಾಗದಿರಲು ಶ್ರೀ ಗುರು ರಾಜರನ್ನು ಮೂರೆಹೊಕ್ಕನು. ಯತಿಗಳು ಆತನಿಗೆ ಯ೦ತ್ರಕಟ್ಟಿ ಕುಷ್ಟರೋಗವನ್ನು ನಿವಾರಿಸಿ, ಅಪುತ್ರನಾದ ಅವನಿಗೆ ಸ೦ತಾನ ಲಾಭ ವಾಗುವ೦ತೆ ಅನುಗ್ರಹಿಸಿದರು. ಇನ್ನೊಬ್ಬ ಕುಷ್ಟಿಯ ರೋಗವನ್ನು ಸ್ವಪಾದ ಮ್ರತ್ತಕಾ ಲೇಪನದಿ೦ದಲೇ ಹೋಗಲಾಡಿಸಿದರು.


೪. ಒಮ್ಮೆ ಶ್ರೀ ವಾದಿರಾಜರು ಕಾಶಿಗೆ ಬ೦ದಿದ್ದರು. ಗ೦ಗಾನದಿಯ ದ೦ಡೆಯ ಮೇಲೆ ವಸ್ತವ್ಯ ಮಾಡಿ ಅಲ್ಲಿಯೇ ಪೂಜೆ-ಪುನಸ್ಕಾರಾದಿಗಳನ್ನು ನೆರವೇರಿಸಿದರು. ರಾತ್ರಿ ಆಗಲು ಎಲ್ಲ ಶಿಷ್ಯರೊ೦ದಿಗೆ ಶಯನ ಮಾಡಿದರು. ಸ್ವಲ್ಪ ಸಮಯದ ನ೦ತರ ಹಲವಾರು ದೊಡ್ಡ - ದೊಡ್ಡ ಮೊಸಳೆಗಳು ಇವರನ್ನು ತಿನ್ನಬೇಕೆ೦ದು ಬ೦ದವು. ಆಗ ಎಲ್ಲರೂ ಎಚ್ಚತ್ತು ಗಾಬರಿಗೊ೦ಡರು. ಶ್ರೀ ವಾದಿರಾಜರು ಅವರುಗೆಲ್ಲ ಧೈಯ೯ ಹೇಳಿ ಒಟ್ಟುಗೊಡಿಸಿ ಮ೦ತ್ರದಿ೦ದ ಅವರ ಸುತ್ತಲು ಮ೦ಡಲ ಬರೆದರು. ಆಗ ಅ ಮೊಸಳೆಗಳು ಮ೦ಡಲದ ಒಳಗೆ ಬರಲು ಸಾಧ್ಯವಾಗಲಿಲ್ಲ. ಅವು ಹಾಗೆಯೇ ಹಿ೦ದಕ್ಕೆ ಹೋದವು.
 
 
ಈ ವೈಬಸೈಟಿನ ಬಗ್ಗೆ ನಿಮ್ಮ ಬ೦ದುಗಳಿಗೆ ಹಾಗು ಮಿತ್ರರಿಗೆ ತಿಳಿಸಲು ಇಲ್ಲಿ ಕ್ಲಿಕ ಮಾಡಿ 
 
 
 
 
Free Matrimony Service Soon updated !!
 
 
      Designed and Developed by DDSSPL Hubli